ಈ 7 ಲಕ್ಷಣಗಳು/ಗುರುತುಗಳು ನಿಮ್ಮಲ್ಲಿ ಕಾಣಿಸುತ್ತಿವೆಯೇ..? ಆದರೆ ಅದು “ಕ್ಯಾನ್ಸರ್” ಆಗಿರಬಹುದು..! ಚೆಕ್ ಮಾಡಿಕೊಳ್ಳಿ!

ಕ್ಯಾನ್ಸರ್.. ಇದೊಂದು ಮಾರಣಾಂತಿಕ ಕಾಯಿಲೆ. ನಮ್ಮ ದೇಹದಲ್ಲಿನ ಅನೇಕ ಭಾಗಗಳಿಗೆ ಕ್ಯಾನ್ಸರ್ ಸೋಂಕು ತಗಲುತ್ತದೆ. ದೇಹದಲ್ಲಿನ ಆಯಾ ಭಾಗದ ಕಣಗಳು ಒಂದು ಕ್ರಮಪದ್ಧತಿಯಲ್ಲಿ ಅಲ್ಲದೆ ಅಸ್ತವ್ಯಸ್ತವಾಗಿ ಬೆಳೆದರೆ ಅವು ಗಡ್ಡೆಗಳಾಗಿ ಬದಲಾಗಿ ಕ್ಯಾನ್ಸರ್‌ಗೆ ದಾರಿಯಾಗುತ್ತದೆ. ಕ್ಯಾನ್ಸರ್ ಬಂದಿದೆ ಎಂದರೆ ಅದು ಆರಂಭದಲ್ಲೇ ಇದೆಯಾ, ಕೊನೆಯ ಹಂತದಲ್ಲಿ ಇದೆಯಾ ಎಂಬ ವಿಷಯವನ್ನು ಗುರುತಿಸಬೇಕು. ಆರಂಭದಲ್ಲಿ ಇದ್ದರೆ ಕ್ಯಾನ್ಸರ್‌ನಿಂದ ಬಚಾವ್ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಾಗಿದ್ದರೆ ಕ್ಯಾನ್ಸರ್ ಬಂದಿದೆ ಎಂದು ತಿಳಿದುಕೊಳ್ಳುವುದು ಹೇಗೆ? ಅದಕ್ಕೆ ದೇಹ ನಮಗೆ ಕೆಲವು ಲಕ್ಷಣಗಳನ್ನು ತಿಳಿಸುತ್ತದೆ. ಅವನ್ನು ಕಂಡುಹಿಡಿಯುವ ಮೂಲಕ ಕ್ಯಾನ್ಸರ್ ಬಂದಿದೆಯೇ, ಇಲ್ಲವೇ ಎಂಬ ವಿಷಯವನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಹಾಗಿದ್ದರೆ ಕ್ಯಾನ್ಸರ್ ಬಂದರೆ ಕಾಣಿಸುವ ಲಕ್ಷಣಗಳು ಏನು ಎಂಬುದನ್ನು ಈಗ ಇಳಿದುಕೊಳ್ಳೋಣ..!

1. ಜೀರ್ಣಕೋಶದಲ್ಲಿ ರಕ್ತಸ್ರಾವ, ಹೊಟ್ಟೆ ನೋವು, ಆಹಾರ ತಿನ್ನುವಲ್ಲಿ ತೊಂದರೆ, ಕರುಳಿನ ಚಲನೆ ಸೂಕ್ತ ರೀತಿಯಲ್ಲಿ ಇಲ್ಲದಿರುವಂತಹ ಸಮಸ್ಯೆಗಳು ಕ್ಯಾನ್ಸರ್‌ನಿಂದ ಬರುತ್ತವೆ. ಈ ಸಮಸ್ಯೆಗಳು ಇದ್ದರೆ ಅನುಮಾನಿಸಬೇಕು. ಕೂಡಲೆ ವೈದ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವ ಅಗತ್ಯ ಇದ್ದರೆ ಚಿಕಿತ್ಸೆ ಮಾಡಿಸಿಕೊಳ್ಳಬೇಕು.

2. ಯಾವುದೇ ಕಾರಣ ಇಲ್ಲದೆ ತೂಕ ಸಡನ್ ಆಗಿ ಕಡಿಮೆಯಾಗುತ್ತಿದ್ದರೆ ನೀವು ಕ್ಯಾನ್ಸರ್‌‍ಗೆ ತುತ್ತಾಗಿದ್ದೀರೇನೋ ಎಂದು ಗುರುತಿಸಬೇಕು. ಕ್ಯಾನ್ಸರ್ ಇದ್ದರೆ ತೂಕ ಸಡನ್ ಆಗಿ ಕಡಿಮೆಯಾಗುತ್ತಾರೆ. ಆದಕಾರಣ ಈ ರೀತಿ ಯಾರಾದರೂ ಆದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

3. ಚರ್ಮದ ಮೇಲೆ ಇರುವ ಮಚ್ಚೆಗಳಲ್ಲಿ ಸಡನ್ ಆಗಿ ಬದಲಾವಣೆ ಬಂದರೆ ಅದನ್ನು ಕ್ಯಾನ್ಸರ್ ಎಂದು ಅನುಮಾನಿಸಬೇಕು. ಯಾಕೆಂದರೆ ಕ್ಯಾನ್ಸರ್ ಇದ್ದರೆ ಚರ್ಮದ ಮೇಲೆ ಇರುವ ಮಚ್ಚೆಗಳ ಪ್ರಮಾಣ, ಬಣ್ಣ ಇನ್ನಿತರೆ ಬದಲಾವಣೆಗಳು ಆಗುತ್ತವೆ. ಅವು ಸಹ ಸಡನ್ ಆಗಿ ಬರುತ್ತವೆ. ಇದರ ಜತೆಗೆ ಆ ಭಾಗದಲ್ಲಿ ತುರಿಕೆ ಬರುತ್ತದೆ. ರಕ್ತಸ್ರಾವ ಸಹ ಆಗುವ ಸಾಧ್ಯತೆಗಳಿವೆ.

4. ದೇಹದಲ್ಲಿ ಎಲ್ಲಿಯಾದರೂ ಅಸಾಧಾರಣವಾಗಿ ಗಡ್ಡೆಗಳು ಬಂದರೆ ಅದನ್ನು ಚೆಕ್ ಮಾಡಿಸಬೇಕು. ಅವು ಕ್ಯಾನ್ಸರ್ ಗಡ್ಡೆಗಳಾಗಿರಬಹುದು. ಕೆಲವು ಸಹ ಕೊಬ್ಬಿನ ಗಡ್ಡೆಗಳು ಸಹ ಉಂಟಾಗುತ್ತವೆ. ಅವುಗಳಿಂದ ತೊಂದರೆ ಏನು ಇರಲ್ಲ. ಆದರೆ ಕ್ಯಾನ್ಸರ್ ಗಡ್ಡೆಗಳಾದರೆ ಮಾತ್ರ ಎಚ್ಚರದಿಂದ ಇರಬೇಕು.

5. ಕೆಲವು ರೀತಿಯ ಕ್ಯಾನ್ಸರ್‌ಗಳಿಂದ ನಮ್ಮ ದೇಹದಲ್ಲಿ ನಿರ್ದಿಷ್ಟ ಭಾಗಗಳಲ್ಲಿ ವಿಪರೀತ ನೋವು ಬರುತ್ತಿರುತ್ತದೆ. ಉದಾಹರಣೆಗೆ ಬೋನ್ ಕ್ಯಾನ್ಸರ್ ತೆಗೆದುಕೊಂಡರೆ ಮೂಳೆ ನೋವು ಬರುತ್ತದೆ.

6. ಕೆಮ್ಮು ಹೆಚ್ಚಾಗಿ ಇದೆಯೇ? 3 ವಾರಗಳಿಗಿಂತಲೂ ಹೆಚ್ಚಿನ ಸಮಯದಿಂದ ಕೆಮ್ಮಿನಿಂದ ಬಳಲುತ್ತಿದ್ದೀರಾ? ಆದರೆ ಅದು ಶ್ವಾಸಕೋಶದ ಕ್ಯಾನ್ಸರ್ ಆಗಿರಬಹುದು. ಆದಕಾರಣ ಒಮ್ಮೆ ಚೆಕ್ ಮಾಡಿಸಿಕೊಳ್ಳುವುದು ಉತ್ತಮ.

7. ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೂ ಆಹಾರ ನುಂಗುವ ಸಮಯದಲ್ಲಿ ಗಂಟಲಲ್ಲಿ ಉರಿಯಾಗುತ್ತಿದ್ದರೂ ಅದನ್ನು ಕ್ಯಾನ್ಸರ್ ಆಗಿ ಅನುಮಾನಿಸಬೇಕು. ಕ್ಯಾನ್ಸರ್ ಕಣಗಳು ಗಂಟಲಲ್ಲಿ ಉರಿಯನ್ನು ಉಂಟು ಮಾಡುತ್ತವೆ.

SHARE