ಕೊಲೆ ಬೆದರಿಕೆ ಹಾಕಿದ ಬಿಗ್ ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿಯ ಅಂದರ್…!!

ಬಾರ್ ಸಪ್ಲೈಯರ್ ಗಿರೀಶ್ ನನ್ನು ಅಪಹರಣ ಮಾಡಿದ ಆರೋಪದ ಮೇಲೆ ಬಿಗ್ ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿಯನ್ನು ಶನಿವಾರ ಬಂಧಿಸಲಾಗಿದೆ. ಪ್ರಕರಣ ಸಂಬಂಧ ಸುನಾಮಿ ಕಿಟ್ಟಿ ಸೇರಿ ಮೂವರನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಸುನೀಲ್ ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಮಾಧ್ಯಮವೊಂದು ವರದಿ ಮಾಡಿರುವಂತೆ ರೆಸ್ಟೋರೆಂಟ್‌ವೊಂದರಲ್ಲಿ ನಟ ಕಿಟ್ಟಿ ಮತ್ತಿತರರು, ಸಪ್ಲೈಯರ್ ಗಿರೀಶ್ ಎಂಬುವವರಿಗೆ ಗನ್ ತೋರಿಸಿ, ಬೆದರಿಸಿ ಕಿಟ್ಟಿ ಮತ್ತು ಅವರ ತಂಡ ಅಪಹರಣ ಮಾಡಿದ್ದಾರೆ ಎಂದು ಆರೋಪಿಸಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಬಾರ್ ಸಪ್ಲೈರ್ ನ್ನು ಬಂಧಿಸಿ ಚಿತ್ರ ಹಿಂಸೆ ನೀಡಿದಷ್ಟೇ ಅಲ್ಲದೆ ಪಾಯಿಂಟ್ ಬ್ಲಾಂಕ್ ಗನ್ ಇಟ್ಟು ಬೆದರಿಕೆ ಹಾಕಿದ್ದಾರೆ, ಚಿತ್ರಹಿಂಸೆ ಕೂಡ ಕೊಟ್ಟಿರುವ ಕಾರಣ ಸುನಾಮಿ ಕಿಟ್ಟಿ ಮೇಲೆ ವಿರುದ್ಧ ಗಿರೀಶ್ ದೂರು ದಾಖಲಿಸಿದ್ದರು.

ಇದೀಗ ಜ್ಞಾನಭಾರತಿ ಪೊಲೀಸರು ಅಪಹರಣ ಮತ್ತು ಅಕ್ರಮ ಶಸ್ತ್ರಾಸ್ತ್ರ ಕಾಯಿದೆಯಡಿ ಸುನಾಮಿ ಕಿಟ್ಟಿ ಸೇರಿದಂತೆ, ಸ್ನೇಹಿತರಾದ ಯೋಗಂದ್ರ ಮತ್ತು ಅರ್ಜುನ್ ನ್ನು ಬಂಧಿಸಿದ್ದು ಕಿಟ್ಟಿ ಸ್ನೇಹಿತ ಸುನೀಲ್ ನ ಶೋಧವನ್ನು ಮುಂದುವರೆಸಿದ್ದಾರೆ.

SHARE