ನಮ್ಮ ದೇಶದಲ್ಲಿ ಫೈಟರ್ ಜೆಟ್ ಓಡಿಸಿದ ಮೊದಲ ಮಹಿಳೆ ಈಕೆ. ಯಾರು ಗೊತ್ತಾ..? ಆಸಕ್ತಿಕರ ಸಂಗತಿಗಳು..!

ಫೈಟರ್ ಜೆಟ್.. ಅಂದರೆ ಯುದ್ಧ ವಿಮಾನಗಳು. ಇವನ್ನು ಓಡಿಸುವುದು ಎಂದರೆ ಸಾಮಾನ್ಯ ಸಂಗತಿಯಲ್ಲ. ಅದೂ ಸಹ ಒಂಟಿಯಾಗಿ ಓಡಿಸಬೇಕಾಗುತ್ತದೆ. ಅದಕ್ಕೆ ಕಠಿಣ ಶಿಕ್ಷಣವನ್ನೂ ಪಡೆಯಬೇಕಾಗುತ್ತದೆ. ಅದೆಷ್ಟೋ ವೇಗವಾಗಿ ಈ ವಿಮಾನಗಳನ್ನು ಓಡಿಸುವುದೆಂದರೆ ಸುಮ್ಮನೆ ಅಲ್ಲ. ಪುರುಷರಿಗೇ ತುಂಬಾ ಕಠಿಣ ಶ್ರಮ ಅಗತ್ಯ. ಇನ್ನು ಯುವತಿಯೊಬ್ಬಳು ಫೈಟರ್ ಜೆಟ್ ಲೀಲಾಜಾಲವಾಗಿ ಓಡಿಸಿದ್ದಾರೆ. ನಮ್ಮ ದೇಶದಲ್ಲಿ ಒಂಟಿಯಾಗಿ ಫೈಟರ್ ಯುದ್ಧ ವಿಮಾನ ಓಡಿಸಿದ ಮೊದಲ ಮಹಿಳೆ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಹಾಗಿದ್ದರೆ ಆಕೆ ಯಾರು ಗೊತ್ತಾ..? ಆಕೆ ಹೆಸರು ಅವನಿ ಚತುರ್ವೇದಿ.

ಅವನಿ ಚತುರ್ವೇದಿ ಅವರದು ಮಧ್ಯಪ್ರದೇಶ. ಈಕೆಯ ಸಹೋದರ ಆರ್ಮಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಹೋದರನನ್ನು ನೋಡಿ ಪ್ರೇರಣೆ ಪಡೆದು ಅವನಿ ಏರ್‌ಫೋರ್ಸ್‌ನಲ್ಲಿ ಶಿಕ್ಷಣ ಪಡೆದರು. ಇಂಡಿಯನ್ ಅಕಾಡೆಮಿ ಹೈದರಾಬಾದ್ ಶಾಖೆಯಲ್ಲಿ ಇವರು ಶಿಕ್ಷಣ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ನಂಬರ್ 23 ಸ್ಕ್ವಾಡ್ರನ್ ಪಾಂಥರ್ಸ್ ಪೋಸ್ಟ್‌ನಲ್ಲಿ ಈಕೆ ನೇಮಕವಾಗಿದ್ದರು. ಇನ್ನು ಇತ್ತೀಚೆಗೆ ಗುಜರಾತ್‌ನಲ್ಲಿನ ಜಾಮ್ ನಗರ್ ಏರ್ ಬೇಸ್ ಮೇಲೆ ಅವನಿ 30 ನಿಮಿಷಗಳ ಕಾಲ ಫೈಟರ್ ಜೆಟ್ ಓಡಿಸಿದರು.

ಎಂಐಜಿ 21 ಬೈಸನ್ ಎಂಬ ಹೆಸರಿನ ಫೈಟರ್ ಜೆಟ್‌ನ್ನು ಅವನಿ ಗುಜರಾತ್‍ನ ಜಾಮ್ ನಗರ್ ಏರ್‌ಬೇಸ್‌ನಲ್ಲಿ 30 ನಿಮಿಷಗಳ ಕಾಲ ಒಂಟಿಯಾಗಿ ಹಾರಾಟ ನಡೆಸಿದ್ದಾರೆ. ಇದರಿಂದ ನಮ್ಮ ದೇಶದಲ್ಲಿ ಫೈಟರ್ ಜೆಟ್ ಹಾರಾಟ ಮಾಡಿದ ಮೊದಲ ಮಹಿಳೆಯಾಗಿ ಅವನಿ ದಾಖಲೆ ಸೃಷ್ಟಿಸಿದ್ದಾರೆ. ಆದರೆ ಫೈಟರ್ ಜೆಟ್ ಓಡಿಸುವಲ್ಲಿ ಅವನಿ ಜತೆಗೆ ಭಾವನಾ ಕಾಮತ್, ಮೋಹನ್ ಸಿಂಗ್ ಎಂಬ ಇನ್ನಿಬ್ಬರು ಯುವತಿಯರೂ ಶಿಕ್ಷಣ ಪಡೆದಿದ್ದಾರೆ. ಹಾಗಾಗಿ ಫೈಟರ್ ಜೆಟ್ ಓಡಿಸಿದ ಅಗ್ರ ದೇಶಗಳ ಸಾಲಿನಲ್ಲಿ ಭಾರತವೂ ನಿಲ್ಲುವಂತಾಗಿದೆ. ಈ ಹಿನ್ನೆಲೆಯಲ್ಲಿ ಅವನಿಗೆ ಇಂಟರ್‌ನೆಟ್‌ನಲ್ಲಿ ಪ್ರಶಂಸೆಗಳ ಸುರಿಮಳೆಯಾಗುತ್ತಿದೆ. ಹಲವರು ಸೆಲೆಬ್ರಿಟಿಗಳು, ರಾಜಕೀಯ ನಾಕರು ಅವನಿಯನ್ನು ಶ್ಲಾಘಿಸಿದ್ದಾರೆ. ಆಕೆಯನ್ನು ಅಭಿನಂದಿಸುತ್ತಿದ್ದಾರೆ. ಅಷ್ಟೆಲ್ಲಾ ಸಾಧನೆ ಮಾಡಿದ ಆಕೆಯನ್ನು ಯಾರೇ ಆಗಲಿ ಅಭಿನಂದಿಸಬೇಕಲ್ಲವೇ.?

SHARE