ನಿತ್ಯ ಟಿಫಿನ್‌ ಆಗಿ ಇಡ್ಲಿ, ದೋಸೆ, ವಡೆ ತಿನ್ನುವುದರಿಂದ ಪ್ರತಿ ಮನೆಯಲ್ಲಿ ಒಬ್ಬರು ಈ ರೋಗದಿಂದ ಬಳಲುತ್ತಿದ್ದಾರೆ..!

ಮೂರು ಹೊತ್ತು ಅನ್ನ ತಿಂದರೆ ದಪ್ಪ ಆಗುತ್ತೇವೆ.. ಆದಕಾರಣ ರಾತ್ರಿಗೆ ಟಿಪನ್ ತಿನ್ನುವ ಮೂಲಕ ಅಷ್ಟೋ ಇಷ್ಟೋ ತೂಕ ಕಡಿಮೆ ಮಾಡಿಕೊಳ್ಳಬಹುದು.. ಬಹಳಷ್ಟು ಮಂದಿ ತೂಕ ಕಡಿಮೆ ಮಾಡಿಕೊಳ್ಳಲು ಅನುಸರಿಸುವ ಪದ್ಧತಿ ಇದು. ಕೆಲವರು ಮೂರು ಹೊತ್ತು ಟಿ, ಕಾಫಿ ಮೇಲೆ ಆಧಾರಪಟ್ಟಿರುತ್ತಾರೆ. ಅದರ ಮೂಲಕ ಹಸಿವು ಕಡಿಮೆಯಾಗಿ, ತೂಕ ಕಡಿಮೆಯಾಗಬೇಕೆಂಬ ಆಲೋಚನೆ ಕೆಲವರದು. ಆದರೆ ಟಿ, ಟಿಫಿನ್‌ನಿಂದ ನಿಮಗೆ ಗೊತ್ತಿಲ್ಲದಂತೆ ನಿಮ್ಮ ದೇಹಕ್ಕೆ ಭಾರಿ ನಷ್ಟ ಉಂಟಾಗುತ್ತದೆ. ಇಡ್ಲಿ, ದೋಸೆ, ವಡೆಯಂತಹ ಟಿಫಿನ್ಸ್ ತಿನ್ನುವುದರಿಂದ ಜೀರ್ಣವ್ಯವಸ್ಥೆಗೆ ಹೊಡೆತ ಬೀಳುತ್ತದೆ.

ಟಿಫಿನ್ಸ್‌ನಿಂದ ಆಗುವ ನಷ್ಟ ಏನು?

ಹಳೆ ಕಾಲದಲ್ಲಿ ನಮ್ಮ ಹಿರಿಯರಾದರೆ ಬೆಳಗ್ಗೆ ದೇಹಕ್ಕೆ ಒಳ್ಳೆಯ ಪೋಷಕಗಳು, ಪುಷ್ಟಿ ನೀಡುವಂತಹ ಆಹಾರವನ್ನು ಸೇವಿಸುತ್ತಿದ್ದರು. ಅದರಲ್ಲೂ ಮೊಸರಿನಲ್ಲಿ ಅನ್ನ, ಜೋಳದ ರೊಟ್ಟಿ, ರಾಗಿ ಮುದ್ದೆಯಂತಹ ಪೋಷಕಾಹಾರ ತೆಗೆದುಕೊಳ್ಳುತ್ತಿದ್ದರು. ಇನ್ನು ಆ ನಂತರದ ಜನರೇಷನ್ ಅನ್ನಕ್ಕೆ ಸೀಮಿತವಾಯಿತು. ಈಗ ಬೆಳಗ್ಗೆ ಟಿಫಿನ್, ಮ್ಮಧ್ಯಾಹ್ನ ಅನ್ನ, ರಾತ್ರಿಗೆ ಅಲ್ಪಾಹಾರ ಹೆಸರಿನಲ್ಲಿ ಮತ್ತೆ ಟಿಫಿನ್ ತಿನ್ನುತ್ತಿದ್ದಾರೆ. ಉಳಿದ ಟಿಫಿನ್‌ಗಳಿಗೆ ಹೋಲಿಸಿದರೆ ಇಡ್ಲಿ ಒಳ್ಳೆಯದೇ ಆದರೂ ಅದರಲ್ಲಿ ಸಾಂಬಾರು, ಶುಂಠಿ ಚಟ್ನಿ, ಕಾರದಪುಡಿ, ತುಪ್ಪ.. ಹೀಗೆ ಎಲ್ಲವನ್ನೂ ಬೆರೆಸಿ ತಿನ್ನುವುದರಿಂದ ಹೊಟ್ಟೆಯಲ್ಲಿ ಅಸಿಡಿಟಿ ಉಂಟಾಗುತ್ತದೆ. ಅದೇ ರೀತಿ ಅಕ್ಕಿಗಿಂತ ಉದ್ದಿನಲ್ಲಿ ಹೆಚ್ಚು ಕ್ಯಾಲರಿಗಳಿರುತ್ತವೆ. ಇವು ಸಕ್ಕರೆ ಅಂಶವನ್ನು ಹೆಚ್ಚಿಸುತ್ತವೆ. ಈ ರೀತಿ ಪ್ರತಿದಿನ ಟಿಫಿನ್ಸ್ ತಿನ್ನುವುದರಿಂದ ಜೀರ್ಣಾಂಗಗಳು ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಅದೇ ರೀತಿ ಜೀರ್ಣ ವ್ಯವಸ್ಥೆಗೂ ಹೊಡೆತ ಬೀಳುತ್ತದೆ. ವಾತ ರೋಗಗಳು ಸಂಧಿನೋವಿನಂತಹವು ಬರುತ್ತವೆ. ನಿತ್ಯ ಇಡ್ಲಿ, ದೋಸೆ, ಪೂರಿ, ಪರೋಟಾದಂತಹ ತಿಂಡಿಗಳನ್ನು ದೀರ್ಘಕಾಲದಿಂದ ತಿನ್ನುತ್ತಿರುವವರಿಗೆ ಅಂದರೆ 15 ವರ್ಷಗಳ ಕಾಲ ತಿನ್ನುವವರಿಗೆ ಸಕ್ಕರೆ ಕಾಯಿಲೆ ಬರುತ್ತದೆ. ಆದಕಾರಣ ವಾರಕ್ಕೆ ಒಂದೆರಡು ಸಲ ಟಿಫಿನ್ಸ್‌ಗೆ ಸೀಮಿತವಾದರೆ ಸಾಕು.

ಏನು ಮಾಡಿದರೆ ಆರೋಗ್ಯಕ್ಕೆ ಒಳಿತು?

ಬೆಳಗಿನ ಹೊತ್ತು ಮೊಸರನ್ನ, ಇನ್ನು ರಾತ್ರಿ ಉಳಿದ ಅನ್ನವನ್ನು ಮೊಸರಿನಲ್ಲಿ ಬೆರೆಸಿಕೊಂಡು ಬೆಳಗ್ಗೆ ತಿನ್ನುವುದು, ಅಥವಾ ಮೊಳೆಕೆ ಬೀಜಗಳನ್ನು, ಹಣ್ಣು, ಖರ್ಜೂರಗಳಂತಹವು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಆಗ ಕೆಲವು ದಿನಗಳಲ್ಲೇ ನಿಮ್ಮ ಆರೋಗ್ಯದಲ್ಲಿ ಬದಲಾವಣೆಯನ್ನು ಕಾಣಬಹುದು. ಅದೇ ರೀತಿ ಮಧ್ಯಾಹ್ನ ಹೊಟ್ಟೆ ತುಂಬ ತಿನ್ನಬೇಕು. ಕೆಲವು ಮಂದಿ ಉಪವಾಸದ ಹೆಸರಿನಲಿ ರಾತ್ರಿ ಅನ್ನ ತಿನ್ನುವುದನ್ನು ಬಿಡುತ್ತಾರೆ. ಆ ರೀತಿಯ ಅಭ್ಯಾಸ ಇರುವವರು ಮತ್ತೆ ಆ ಸಮಯದಲ್ಲಿ ಇಡ್ಲಿ, ದೋಸೆ, ಬೋಂಡಾ, ಚಪಾತಿ, ಪರೋಟಾ ತಿನ್ನುತ್ತಾರೆ. ಆ ರೀತಿ ಮಾಡುವುದರಿಂದ ಅನ್ನ ತಿನ್ನುವುದಕ್ಕಿಂತ ಹೆಚ್ಚಿನ ನಷ್ಟ ದೇಹಕ್ಕಾಗುತ್ತದೆ. ರಾತ್ರಿ ಹೊತ್ತು ಅಲ್ಪಾಹಾರ ತೆಗೆದುಕೊಂಡರೆ ಆರೋಗ್ಯವಾಗಿ ಇರಬಹುದು. ಒಳ್ಳೆಯ ಆರೋಗ್ಯವನ್ನು ನೀವು ಪಡೆಯಬಹುದು.

SHARE