ಮಣ್ಣಿನ ಮಡಿಕೆಯಲ್ಲಿನ ನೀರು ಸೇವಿಸುವುದರಿಂದ ಬಹಳಷ್ಟು ಕಾಯಿಲೆಗಳಿಂದ ದೂರ ಇರಬಹುದು.!

ಇನ್ನೇನು ಬೇಸಿಗೆ ಆರಂಭವಾಗುತ್ತಿದೆ. ಈಗ ಹೆಚ್ಚಿನ ಮಂದಿ ಫ್ರಿಜ್ ವಾಟರ್‌ಗೆ ಸೀಮಿತವಾಗುತ್ತಿದ್ದಾರೆ. ಇದರಿಂದ ಹಲವಾರು ಅನಾರೋಗ್ಯ ಸಮಸ್ಯೆಗಳು ತಪ್ಪಿದ್ದಲ್ಲ. ಇದರಿಂದ ಪಾರಾಗಬೇಕದರೆ ಮಣ್ಣಿನ ಮಡಿಕೆ ಬಳಸುವುದು ಉತ್ತಮ. ಇಂದು ಮಣ್ಣಿನ ಮಡಿಕೆಗಳನ್ನು ಬಳಸುವವರು ತುಂಬಾ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಅದೇನಿದ್ದರೂ ಟೆಫ್ಲಾನ್ ಕೋಟಿಂಗ್, ಸ್ಟೀಲ್ ಪಾತ್ರೆಗಳನ್ನು ಬಳಸುವವರೇ ಹೆಚ್ಚು. ಟೆಫ್ಲಾನ್ ಕೋಟಿಂಗ್ ಪಾತ್ರೆಗಳಿಂದ ಕ್ಯಾನ್ಸರ್‌‍ನಂತಹ ಖಾಯಿಲೆಗಳು ಬರುತ್ತವೆ ಎಂಬುದು ಗೊತ್ತಾಗಿದೆ. ನಾವು ಆರೋಗ್ಯವಾಗಿ ಇರಬೇಕಾದರೆ ಮಣ್ಣಿನ ಪಾತ್ರೆಗಳನ್ನು ಬಳಸುವುದು ಉತ್ತಮ.

Image result for amazing-health-benefits-of-using-clay-water-pot

ಮಣ್ಣಿನ ಮಡಿಕೆಯಲ್ಲಿನ ನೀರಿನಿಂದ ಬಹಳಷ್ಟು ಅನಾರೋಗ್ಯಗಳನ್ನು ಗುಣಪಡಿಸಿಕೊಳ್ಳಬಹುದು ಎನ್ನುತ್ತಿದ್ದಾರೆ ತಜ್ಞರು. ಫ್ರಿಜ್ ಬಳಸುವುದರಿಂದ ನಮಗಷ್ಟೇ ಅಲ್ಲದೆ ವಾತಾವರಣಕ್ಕೆ ಸಹ ಸಾಕಷ್ಟು ಅಪಾಯ ಕಾದಿದೆ.

ಫ್ರಿಜ್‍ನಿಂದ ಉತ್ಪನ್ನವಾಗುವ ಹಾನಿಕಾರಕ ವಾಯುಗಳು ನೇರವಾಗಿ ಓಜೋನ್ ಪೊರೆಯ ಮೇಲೆ ಪ್ರಭಾವ ತೋರುತ್ತವೆ. ಇನ್ನು ಫ್ರಿಜ್ ಬಳಸುವುದರಿಂದ ವಿದ್ಯುತ್ ಬಿಲ್ ಸಹ ಸಿಕ್ಕಾಪಟ್ಟೆ ಬರುತ್ತದೆ. ಕರೆಂಟ್ ಬಿಲ್ ಸಂಗತಿ ಪಕ್ಕಕ್ಕಿಟ್ಟರೆ, ಫ್ರಿಜ್ ನೀರಿನಿಂದ ಗಂಟಲಿನ ಸಮಸ್ಯೆಗಳು, ಅಲರ್ಜಿ, ಸೈನಸ್‌ನಂತಹ ಸಮಸ್ಯೆಗಳು ಬರುವ ಸಾಧ್ಯತೆಗಳಿವೆ.

Image result for amazing-health-benefits-of-using-clay-water-pot

ಮಡಿಕೆಯಲ್ಲಿನ ನೀರು ಸೇವಿಸುದರಿಂದ ಯಾವುದೇ ರೀತಿಯ ಸಮಸ್ಯೆಗಳು ಬರಲ್ಲ. ಮಣ್ಣಿನ ಮಡಿಕೆಯಲ್ಲಿನ ನೀರಿನಿಂದ ಸಮಪ್ರಮಾಣದ ಥಂಡಿ ಸಿಗುವ ಮೂಲಕ ಬೆವರಿನ ಮೂಲಕ ಕಳೆದುಕೊಂಡ ಲವಣಗಳನ್ನು ಈ ನೀರಿನಿಂದ ಪಡೆಯಬಹುದು. ಈ ನೀರು ಕಿಡ್ನಿ, ಮಿದುಳನ್ನು ಚುರುಕಾಗಿ ಇಡುತ್ತವೆ ಎನ್ನುತ್ತಿದ್ದಾರೆ ತಜ್ಞರು.

SHARE