ಈ 16 ರೀತಿಯ ಆಹಾರಗಳನ್ನು ಅಲ್ಸರ್‌ನಿಂದ ನರಳುತ್ತಿರುವವರು ಕಡ್ಡಾಯವಾಗಿ ತೆಗೆದುಕೊಳ್ಳಬೇಕು

ವಯಸ್ಸಿನೊಂದಿಗೆ ಸಂಬಂಧ ಇಲ್ಲದೆ ಇತ್ತೀಚೆಗೆ ಬಹಳಷ್ಟು ಮಂದಿ ಎದುರಿಸುತ್ತಿರುವ ಪ್ರಧಾನ ಸಮಸ್ಯೆಗಳಲ್ಲಿ ಹೊಟ್ಟೆ ಹುಣ್ಣು ಸಹ ಒಂದು. ಈ ಹುಣ್ಣನ್ನು ಆಂಗ್ಲದಲ್ಲಿ ಅಲ್ಸರ್ ಎಂದು ಕರೆಯುತ್ತಾರೆ. ಹೊಟ್ಟೆಯಲ್ಲಿ ತೆರೆದುಕೊಂಡಿರುವ ರಂಧ್ರಗಳು ವೃದ್ಧಿಯಾಗುತ್ತವೆ. ಈ ರೀತಿ ಬದಲಾಗಲು ಮುಖ್ಯ ಕಾರಣ, ಹೆಲಿಕಾಬಾಕ್ಟರ್ ಪೈಲೋರಿ ಎಂಬ ಸೂಕ್ಷ್ಮ ಜೀವಿಗಳು ಎಂದು ಅಧ್ಯಯನಗಳು ತಿಳಿಸುತ್ತವೆ. ಅಷ್ಟೇ ಅಲ್ಲದೆ ಯಾರೇ ಆಗಲಿ ನಿತ್ಯ ಆಸ್ಪಿರಿನ್ ಮತ್ತು ಇಬುಪ್ರೋಫೆನ್ ಎಂಬ ಮಾತ್ರೆಗಳನ್ನು ಬಳಸುತ್ತಾರೋ, ಸ್ಟೀರಾಯ್ಡ್‌ಗಳಲ್ಲ ಉರಿಯನ್ನು ಕಡಿಮೆ ಮಾಡುವ ಔಷಧಿಗಳನ್ನು ಹೆಚ್ಚಾಗಿ ಬಳಸುತ್ತಾರೋ, ಅಂತಹವರಲ್ಲಿ ಹೊಟ್ಟೆಯಲ್ಲಿ ಹುಣ್ಣಾಗುವ ಅವಕಾಶಗಳು ಹೆಚ್ಚಾಗಿರುತ್ತವೆ.

foods to eat when suffering from stomach ulcers

ಇವರೇನಾದರೂ ಹೊಟ್ಟೆಯಲ್ಲಿ ಹುಣ್ಣಿನಿಂದ ನರಳುತ್ತಿದ್ದರೆ, ತೆಗೆದುಕೊಳ್ಳುತ್ತಿರುವ ಔಷಧಿಗಳ ಜತೆಗೆ ಕೆಲವು ಆಹಾರಗಳನ್ನು ಕಡ್ಡಾಯವಾಗಿ ತಿನ್ನಬೇಕಾಗುತ್ತದೆ. ಅದೇ ರೀತಿ ಕೆಲವನ್ನು ದೂರ ಇಡಬೇಕಾಗುತ್ತದೆ. ಈ ಹುಣ್ಣಿನಿಂದ ನರಳುತ್ತಿರುವವರು ಯಾವ ರೀತಿಯ ಆಹಾರ ತೆಗೆದುಕೊಳ್ಳಬೇಕು ಎಂಬ ವಿಚಾರವಾಗಿ ನಿರ್ದಿಷ್ಟವಾದ ಪ್ರಣಾಳಿಕೆ ಏನು ಇಲ್ಲ. ಒಂದು ವೇಳೆ ಆ ರೀತಿ ಏನಾದರೂ ತೆಗೆದುಕೊಂಡರೆ ಈ ಕಾಯಿಲೆ ವಾಸಿಯಾಗುತ್ತದೆ ಎಂದು ಹೇಳಲಾಗಲ್ಲ. ಆದರೆ ಕೆಲವು ಆಹಾರಗಳು, ಹೊಟ್ಟೆಯಲ್ಲಿನ ಹುಣ್ಣಿಗೆ ಕಾರಣವಾಗವ ಹೆಲಿಕಾಬಾಕ್ಟರ್ ಪೈಲೋರಿ ಮೇಲೆ ಹೋರಾಡುತ್ತವೆಂದು ಗುರುತಿಸಿದ್ದಾರೆ. ಈಗ ನಾವು ಹೊಟ್ಟೆಯಲ್ಲಿ ಆಮ್ಲಗಳು ಹೆಚ್ಚಾಗಿ ಬಿಡುಗಡೆ ಆಗದಂತೆ ತಡೆಯುವ ಔಷಧಿಗಳು ಮತ್ತು ಆಂಟಿ ಬಯೋಟಿಕ್ಸ್ ಜತೆಗೆ ತೆಗೆದುಕೊಳ್ಳಬೇಕಾದ ಆಹಾರ ಏನು ಎಂಬ ವಿಷಯವನ್ನು ತಿಳಿದುಕೊಳ್ಳೋಣ. ಈ ಆಹಾರಗಳೆಲ್ಲಾ ನಮ್ಮ ಆರೋಗ್ಯಕ್ಕೆ ಯಾವ ರೀತಿಯಲ್ಲಿ ಲಾಭ ಎಂಬುದನ್ನು ತಿಳಿದುಕೊಳ್ಳೋಣ.

1. ಹೂಕೋಸು:

ಹೂಕೋಸಿನಲ್ಲಿ ಸುಲ್ಫೋರಫಾನೆ ಹೆಚ್ಚಾಗಿ ಇರುತ್ತದೆ. ಇದು ಹೆಲಿಕಾಬಾಕ್ಟರ್ ಪೈಲೋರಿ ಎಂಬ ಸೂಕ್ಷ್ಮ ಜೀವಿಯ ಮೇಲೆ ಹೋರಾಡುತ್ತದೆ. ಒಂದು ಪ್ರಯೋಗದ ಪ್ರಕಾರ ಯಾರು ನಿತ್ಯ ಎರಡು ಸಲ ಒಟ್ಟು 7 ದಿನಗಳ ಕಾಲ ಎಲೆಕೋಸು ತಿನ್ನುತ್ತಾರೋ ಅಂತಹವರಲ್ಲಿ ಈ ಸೂಕ್ಷ್ಮ ಕ್ರಿಮಿಗಳ ಮೇಲೆ ಶೇ.78ರಷ್ಟು ಪ್ರತಿಕೂಲ ಪರಿಣಾಮ ಬೀರುತ್ತದೆ. ಇದು ಹುಣ್ಣನ್ನು ನಿವಾರಿಸುವಲ್ಲಿ ಸಹಕಾರಿ. ಇದರಲ್ಲಿ ವಿಟಮಿನ್ ಸಿ ಮತ್ತು ಫೈಬರ್ ಅಂಶ ಹೆಚ್ಚಾಗಿರುತ್ತದೆ. ಪಲ್ಯದ ರೂಪದಲ್ಲಿ ಅಥವಾ ಚೆನ್ನಾಗಿ ಬೇಯಿಸಿಕೊಂಡು ತಿಂದರೂ ಆಯಿತು.

2. క్యాబేజి :

2. ಎಲೆಕೋಸು:
ಇದರಲ್ಲಿ ಎಸ್-ಮಿಥೈಲ್ ಮಿತಿಯೋನೈನ್ ಎಂಬ ಪದಾರ್ಥ ಇರುತ್ತದೆ. ಇದನ್ನೇ ವಿಟಮಿನ್ ಯು ಆಗಿ ಕರೆಯುತ್ತಾರೆ. ಹೊಟ್ಟೆ ಹುಣ್ಣು ವಾಸಿ ಮಾಡುವಲ್ಲಿ ಇದು ಸಹಕಾರಿ. ಹೊಟ್ಟೆಯಲ್ಲಿನ ಹುಣ್ಣಿಗೆ ಪಿಎಚ್ ಪ್ರಮಾಣ ಸಮತೋಲನ ಕಳೆದುಕೊಳ್ಳುವುದೇ ಕಾರಣ. ಆ ರೀತಿ ಆಗದಂತೆ ಇದು ತಡೆಯುತ್ತದೆ. ಇದರಲ್ಲಿ ಅಮಿನೋ ಆಮ್ಲ ಗ್ಲುಟಮಿನ್ ಸಹ ಇರುತ್ತದೆ. ಹುಣ್ಣನ್ನು ವಾಸಿ ಮಾಡುವಲ್ಲಿ ಇದು ಸಹಕಾರಿ. ಇದನ್ನು ಸಲಾಡ್ ರೂಪದಲ್ಲಿ ಅಥವಾ ಹಸಿಯಾಗಿ ತಿಂದರೂ ಸರಿ.

3. ಮೂಲಂಗಿ:
ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿ ಇರುತ್ತದೆ. ಜೀರ್ಣ ಚೆನ್ನಾಗಿ ಆಗುತ್ತದೆ. ಇದು ಇತರೆ ಪದಾರ್ಥಗಳನ್ನು ಹೀರಿಕೊಳ್ಳುವಲ್ಲಿ ಸಹಕಾರಿ. ಪ್ರತಿ ದಿನ ಮೂಲಂಗಿ ತಿನ್ನಿ. ಈ ರೀತಿ ಮಾಡುವುದರಿಂದ ಹೊಟ್ಟೆ ಹುಣ್ಣಾಗಲ್ಲ. ಜೀರ್ಣ ಚೆನ್ನಾಗಿ ಆಗುವಂತೆ ನೋಡುತ್ತದೆ. ಜೀರ್ಣ ಸಂಬಂಧಿ ರೋಗಗಳು ವಾಸಿಯಾಗುತ್ತವೆ.

4. ಆಪಲ್:
ಪ್ರತಿ ದಿನ ಆಪಲ್ ಒಂದನ್ನು ತಿನ್ನಿ. ಈ ರೀತಿ ಮಾಡುವುದರಿಂದ ಹೊಟ್ಟೆ ಹುಣ್ಣು ತಡೆಯಬಹುದು. ಇದರಲ್ಲಿ ಫಲಾವೋನೋಯಿಡ್ಸ್ ಇರುತ್ತವೆ. ಇದು ಹೆಲಿಕಾಬಾಕ್ಟರ್ ಪೈಲೋರಿ ಎಂಬ ಸೂಕ್ಷ್ಮ ಜೀವಿಗಳನ್ನು ನಾಶ ಮಾಡುತ್ತದೆ.

5. ಬ್ಲೂ ಬೆರ್ರೀಸ್:
ಪ್ರತಿ ದಿನ ಬೆಳಗ್ಗೆ ಬ್ಲೂ ಬೆರ್ರಿ ತಿನ್ನುವುದರಿಂದ ಹೊಟ್ಟೆ ಹುಣ್ಣು ಗುಣಪಡಿಸಿಕೊಳ್ಳಬಹುದು. ಇದರಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಮತ್ತು ಪೋಷಕಗಳು ಹೆಚ್ಚಾಗಿ ಇರುತ್ತವೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜತೆಗೆ ಹೊಟ್ಟೆ ಹುಣ್ಣನ್ನು ತಡೆಯುತ್ತದೆ.

6. ರಾಸ್ ಬೆರ್ರೀಸ್:
ರಾಸ್ ಬೆರ್ರೀಸ್ ಮತ್ತು ಬ್ಲಾಕ್ ಬೆರ್ರೀಸ್ ಇವೆರಡರಲ್ಲಿ ಫೆನೋಲಿಕ್ ಎಂಬ ಪದಾರ್ಥ ಹೆಚ್ಚಾಗಿ ಇರುತ್ತದೆ. ಇದರಲ್ಲಿ ಜೀರ್ಣವಾಗುವ ಫೈಬರ್ ಅಂಶವೂ ಹೆಚ್ಚಾಗಿ ಇರುತ್ತದೆ. ಇದರಿಂದ ಜೀರ್ಣ ಚೆನ್ನಾಗಿ ಆಗುತ್ತದೆ. ಜೀರ್ಣ ಸಂಬಂಧಿ ಉರಿಯನ್ನು ಇದು ತಡೆಯುತ್ತದೆ.

7. ಸ್ಟ್ರಾಬೆರ್ರೀಸ್:
ಇದು ಹೊಟ್ಟೆಯಲ್ಲಿ ರಕ್ಷಣ ಕವಚದಂತೆ ಇದ್ದು ಹೊಟ್ಟೆ ಹುಣ್ಣು ಬಾರದಂತೆ ತಡೆಯುತ್ತದೆ. ಸ್ಟ್ರಾಬೆರ್ರೀಸ್‍ನಲ್ಲಿ ಆಂಟಿ ಆಕ್ಸಿಡೆಂಟ್ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇದು ಹುಣ್ಣಿನಿಂದ ದೇಹವನ್ನು ಕಾಪಾಡುತ್ತವೆ. ಪ್ರತಿನಿತ್ಯ ಒಂದು ಕಪ್ ಸ್ಟ್ರಾ ಬೆರ್ರೀಸ್ ಧಾನ್ಯಗಳ ಜತೆಗೆ ತೆಗೆದುಕೊಳ್ಳಬೇಕು.

8. గంట మిరియాలు :

8. ದೊಣ್ಣೆ ಮೆಣಸಿನಕಾಯಿ:
ಸಿಹಿಯಾದ ದೊಣ್ಣೆ ಮೆಣಸಿನಕಾಯಿ ತಿನ್ನುವುದರಿಂದ ಹೊಟ್ಟೆಯಲ್ಲಿನ ಹುಣ್ಣನ್ನು ಗುಣಪಡಿಸಿಕೊಳ್ಳಬಹುದು. ನೀವು ತೆಗೆದುಕೊಳ್ಳುವ ಸಲಾಡ್‌ನಲ್ಲಿ ಇವನ್ನು ನಿತ್ಯ ತೆಗೆದುಕೊಳ್ಳಿ. ಹೊಟ್ಟೆಹುಣ್ಣು ಬರಲ್ಲ.

9. ಕ್ಯಾರೆಟ್:
ಹೊಟ್ಟೆಯ ಗೋಡೆಗಳನ್ನು ಶಕ್ತಿಯುತವಾಗಿ ಮಾಡುವಲ್ಲಿ ಕ್ಯಾರೆಟ್ ಸಾಕಷ್ಟು ಸಹಕಾರಿ. ಇದರಲ್ಲಿನ ಎ ವಿಟಮಿನ್ ಹೊಟ್ಟೆ ಹುಣ್ಣನ್ನು, ಜೀರ್ಣಕೋಶ ಸಂಬಂಧಿ ಉರಿಯನ್ನು, ಅಜೀರ್ಣವನ್ನು ಕಡಿಮೆ ಮಾಡುತ್ತದೆ. ನಿತ್ಯ ಒಂದು ಗ್ಲಾಸ್ ಕ್ಯಾರೆಟ್ ಜ್ಯೂಸ್ ಅಥವಾ ಹಾಗೆಯೇ ತಿಂದರೂ ಸರಿ.

10. ಬ್ರೊಕೋಲಿ:
ಇದರಲ್ಲಿ ಒಂದು ರೀತಿಯ ರಾಸಾಯನಿಕ ಇದೆಯಂತೆ. ಇದು ಹೊಟ್ಟೆ ಹುಣ್ಣಿಗೆ ಕಾರಣವಾಗುವ ಸೂಕ್ಷ್ಮ ಜೀವಿಗಳನ್ನು ನಾಶ ಮಾಡುತ್ತದೆ. ಬ್ರೊಕೋಲಿಯಲ್ಲಿ ಇರುವ ಸಲ್ಫೋರಾಫಾನ್ ಸಾಕಷ್ಟು ಸಹಕಾರಿ. ಮಧ್ಯಾಹ್ನದ ಊಟದ ಸಮದಲ್ಲಿ ಇದನ್ನು ಬಳಸಿ.

11. పెరుగు :

11. ಮೊಸರು:
ನಮ್ಮ ದೇಹಕ್ಕೆ ಅಗತ್ಯವಾದ ಆಹಾರಗಳಲ್ಲಿ ಮೊಸರು ಸಹ ಒಂದು. ಇದರಲ್ಲಿ ಪ್ರೋ ಬಯೋಟಿಕ್, ಲಕ್ಟೋಬಾಸಿಲ್ಲಸ್ ಮತ್ತು ಸಿಡೋಫೈಲಸ್ ಎಂಬ ಸೂಕ್ಷ್ಮ ಜೀವಿಗಳು ಇರುತ್ತವೆ. ಇದು ಹೊಟ್ಟೆಯಲ್ಲಿನ ಹುಣ್ಣನ್ನು ಕಡಿಮೆ ಮಾಡುವಲ್ಲಿ ಸಹಕಾರಿ. ಜೀರ್ಣಶಕ್ತಿಯನ್ನೂ ಹೆಚ್ಚಿಸುತ್ತದೆ. ಸೋಯಾ ಉತ್ಪನ್ನಗಳಲ್ಲೂ ಪ್ರೊಬಯೋಟಿಕ್ಸ್ ಅಧಿಕವಾಗಿ ಇರುತ್ತವೆ.

12. ಆಲೀವ್ ಎಣ್ಣೆ:
ಹೊಟ್ಟೆಯಲ್ಲಿನ ಹುಣ್ಣನ್ನು ನಿವಾರಿಸುವ ಶಕ್ತಿ ಆಲೀವ್ ಆಯಿಲ್‌ಗೆ ಇದೆ ಎನ್ನುತ್ತಿವೆ ಅಧ್ಯಯನಗಳು. ಇದರಲ್ಲಿರುವ ಫೆನೋಲ್ಸ್ ಸೂಕ್ಷ್ಮ ಜೀವಿಗಳ ವಿರುದ್ದ ಇದು ಹೋರಾಡುತ್ತದೆ. ಇದರಿಂದ ಹೆಲಿಬಾಕ್ಟರ್ ಪೈಲೋರಿ ಸೂಕ್ಷ್ಮ ಜೀವಿಗಳು ಇತರೆ ಭಾಗಗಳಿಗೆ ಹರಡದಂತೆ ತಡೆಯುತ್ತದೆ.

13. ಜೇನು ತುಪ್ಪ:
ಹೊಟ್ಟೆಯಲ್ಲಿನ ಸೂಕ್ಷ್ಮ ಜೀವಿಗಳನ್ನು ಇದು ಕೊಲ್ಲುತ್ತದೆ. ಅಷ್ಟೇ ಅಲ್ಲ ಹೊಟ್ಟೆ ಹುಣ್ಣನ್ನು ಗುಣಪಡಿಸುವಲ್ಲೂ ಇದು ಸಹಕಾರಿ. ಬೆಳಗ್ಗೆ ಒಂದು ಸ್ಫೂನ್ ಜೇನನ್ನು ತಿನ್ನುವುದರಿಂದ ಅಥವಾ ಆಹಾರದಲ್ಲಿ ಬಳಸುವುದರಿಂದ ಹೊಟ್ಟೆ ಹುಣ್ಣಿಗೆ ಗುಡ್ ಬೈ ಹೇಳಬಹುದು.

14. వెల్లుల్లిపాయలు :

14. ಬೆಳ್ಳುಳ್ಳಿ ಎಸಳು:
ಇದು ಹೆಲಿಕಾಬಾಕ್ಟರ್ ಪೈಲೋರಿ ಸೂಕ್ಷ್ಮಜೀವಿಯನ್ನು ಸಂಪೂರ್ಣ ನಿಯಂತ್ರಿಸುತ್ತದೆ. ಹೊಟ್ಟೆ ಹುಣ್ಣು ಬಾರದಂತೆ ತಡೆಯುತ್ತದೆ. ಇದರಲ್ಲಿ ಸೂಕ್ಷ್ಮ ಜೀವಿಗಳ ವಿರುದ್ಧ ಹೋರಾಡುವ ಸಾಕಷ್ಟು ರಾಸಾಯನಿಕಗಳಿವೆ. ಪ್ರತಿನಿತ್ಯ ಒಂದೆರಡು ಬೆಳ್ಳುಳ್ಳಿ ಎಸಳು ತಿನ್ನುವುದರಿಂದ ಹೊಟ್ಟೆ ಹುಣ್ಣು ತಡೆಯಬಹುದು.

15. ಕೆಫಿನ್ ಇಲ್ಲದ ಗ್ರೀನ್ ಟೀ:
ಕೆಫಿನ್ ಇಲ್ಲದ ಗ್ರೀನ್ ಟೀಯಲ್ಲಿ ಸಿ ಜಿ ಸಿ ಎಂಬ ಪದಾರ್ಥ ಇರುತ್ತದೆ. ಇದರಲ್ಲಿ ಕಾಟೆಚಿನ್ ಎಂಬ ಪದಾರ್ಥ ಇದ್ದು ಇದು ಹೊಟ್ಟೆ ಹುಣ್ಣನ್ನು ತಡೆಯುವಲ್ಲಿ ಸಹಕಾರಿ. ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಒಂದು ಕಪ್ ಗ್ರೀನ್ ಟೀ ಸೇವಿಸಿ.

16. గ్లైకో రైస్ ;

16. ಗ್ಲೆಕೋ ರೈಸ್:
ಅತ್ಯಂತ ಪ್ರಾಚೀನ ಔಷಧಿಗಳಲ್ಲಿ ಗ್ಲೆಕೋ ರೈಸ್ ಸಹ ಒಂದು. ಇದರಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಇದು ಹೊಟ್ಟೆಯಲ್ಲಿನ ಉರಿಯನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿವೆ. ಹಾಗಾಗಿ ಇದು ಹೊಟ್ಟೆಹುಣ್ಣನ್ನು ತಡೆಯುತ್ತದೆ.

SHARE