ಶ್ರೀ ರಾಮನ ೫ ಶಕ್ತಿಶಾಲಿ ಪ್ರಾರ್ಥನಾ ಮಂತ್ರಗಳು.

ಹಿಂದೂ ಧರ್ಮದಲ್ಲಿ ಅತಿ ಹೆಚ್ಚು ಪೂಜಿಸಲ್ಪಡುವ ದೇವರು ಶ್ರೀರಾಮ. ” ಮರ್ಯಾದ ಪುರುಷೋತ್ತಮ” ಎಂದು ಕರೆಯಲ್ಪಡುವ ಶ್ರೀರಾಮನು ಪ್ರತಿಯೊಬ್ಬ ಹಿಂದುವಿನ ಮನೆ,ಮನದಲ್ಲಿ ಆದರ್ಶ ವ್ಯಕ್ತಿಯಾಗಿ ಪೂಜ್ಯ ಸ್ಥಾನ ಪಡೆದಿದ್ದಾನೆ. ಹನ್ನೊಂದು ಸಾವಿರ ವರ್ಷಗಳ ವರೆಗೆ ರಾಮ ರಾಜ್ಯವೆಂದು ಕರೆಯಲ್ಪಟ್ಟ ಅಯೋದ್ಯೆಯ ರಾಜನಾಗಿ ಸಕಲ ಕಾಲಕ್ಕೂ ಆದರ್ಶ ರಾಜ ಎನಿಸಿಕೊಂಡಿದ್ದಾನೆ. ಈತನ ಆಳ್ವಿಕೆಯ ಕಾಲವನ್ನು ‘ ಸುವರ್ಣ ಯುಗ’ ಎಂದೇ ಕರೆಯಲಾಗಿದೆ. ಭಾರತದಲ್ಲಿ ಉತ್ತಮ ಆಡಳಿತಕ್ಕೆ ರಾಮರಾಜ್ಯ ಎಂದೇ ಕರೆಯುತ್ತಾರೆ.

ಮುಖ್ಯವಾಗಿ ಶ್ರೀರಾಮನು ಮಹಾ ವಿಷ್ಣುವಿನ ೭ ನೆ ಅವತಾರವಾಗಿ ಜನ್ಮವೆತ್ತಿ ಅಸುರ ರಾಜ ರಾವಣ ನನ್ನು ಸಂಹರಿಸಿ, ಭೂಮಿಯಲ್ಲಿ ಪುನಃ ಧರ್ಮವನ್ನು ಸ್ಥಾಪಿಸಿದ. ಆದ್ದರಿಂದಲೇ ಇವತ್ತಿಗೂ ಸಹ ಆದರ್ಶ ವ್ಯಕ್ತಿ ಹಾಗೂ ರಾಜನಾಗಿ ಗುರ್ತಿಸಲ್ಪಡುವನು.
ಶ್ರೀರಾಮನ ಭಕ್ತರು ಆತನ ಕೃಪೆಗಾಗಿ ದೇವಸ್ಥಾನಗಳಿಗೆ ತೆರಳಿ ಅವನ ನಾಮ ಮತ್ತು ಮಂತ್ರಗಳನ್ನು ಜಪಿಸಿ ಪ್ರಾರ್ಥಿಸುತ್ತಾರೆ.

ಶ್ರೀ ರಾಮನ ೫ ಶಕ್ತಿಶಾಲಿ ಪ್ರಾರ್ಥನಾ ಮಂತ್ರಗಳು ಇಲ್ಲಿವೆ.

೧. ರಾಮ ಮೂಲಮಂತ್ರ

” ಓಂ ಶ್ರೀ ರಾಮಾಯ ನಮಃ”

೨.ರಾಮ ತಾರಕ ಮಂತ್ರ

“ಶ್ರೀರಾಮ ಜಯ ರಾಮ ಜಯ ಜಯ ರಾಮ ”

೩. ರಾಮ ಗಾಯತ್ರಿ ಮಂತ್ರ

“ಓಂ ಧಶರಥಾಯ ವಿಧ್ಮಹೇ
ಸೀತಾ ವಲ್ಲಭಾಯ ಧೀಮಹೀ
ತನ್ನೋ ರಾಮ ಪ್ರಚೋದಯಾತ್ ”

೪. ರಾಮ ಧ್ಯಾನ ಮಂತ್ರ

” ಓಂ ಅಪದಮಾಪಹಾರ್ತರಂ
ಧಾತರಂ ಸರ್ವಸಂಪದಂ ಲೋಕಾಭಿರಾಮಂ ಶ್ರೀರಾಮಂ
ಭ್ಯೋ-ಭ್ಯೋ ನಮಾಮ್ಯಹಂ ”

೫. ಕೋದಂಡ ರಾಮ ಮಂತ್ರ

“ಶ್ರೀರಾಮ ಜಯರಾಮ ಕೋದಂಡ ರಾಮ “

SHARE